Friday, September 7, 2012


               
ಅಂದು ಅಲ್ಲಾಹನು ನಿನ್ನಲ್ಲಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುವನು.
ನೀ ಮಾಡಿದ ಪಾಪದ ಪುಸ್ತಕವನ್ನು ತೆರೆಯಲಾಗುವುದು,
ಇಂದು ಗೋಪ್ಯವಾಗಿ ಮಾಡಿದ ಒಂದೊಂದು ಪಾಪಗಳೂ,
ಅಂದು ಅಲ್ಲಾಹನು ಉದ್ದೇಶಿಸಿದರೆ  ಅದನ್ನು ಬಹಿರಂಗಪಡಿಸುವನು.
ಅಂದು ನಿನ್ನ ನಾಲಗೆಗೆ ಮುದ್ರೆ ಒತ್ತಲಾಗುವೂದು,
ಅಂದು ನಿನ್ನ ಕೈ, ಕಾಲುಗಳು ಸಾಕ್ಷ್ಯ ಹೇಳುವೂದು,
ನಾನು ಯಾವ ಪಾಪವನ್ನೂ ಮಾಡಿಲ್ಲವೆಂದು ಸಮಾದಾನಿಸುವುದಿರಲಿ,
ನಿನ್ನ ಯೌವ್ವನವನ್ನು ಯಾತಕ್ಕಾಗಿ ಬಳಸಿದೆ?
ನಿನ್ನ ಸಂಪತ್ತನ್ನು ಯಾತಕ್ಕಾಗಿ ಬಳಸಿದೆ..?
ನಿನ್ನ ಮಕ್ಕಳನ್ನು ನೀನು ಯಾವ ರೀತಿ ಬೆಳೆಸಿದೆ ..?
ಇದಕ್ಕೆಲ್ಲ ಉತ್ತರ ಹೇಳದೆ ಒಂದು ಅಡಿ ಮುಂದಕ್ಕೆ ಇಡಲು ಸಾಧ್ಯವಿಲ್ಲ...
ಅಂದು ಗೋಗರೆದು ಪ್ರಯೋಜನವಿಲ್ಲ,
900 - 950 ವರ್ಷಗಳು ಬದುಕಿದ ಪ್ರವಾದಿಗಳಿದ್ದರು ಈ ಭೂಮಿಯಲ್ಲಿ,
ಅವರು ಹೋಗುವ ಸ್ವರ್ಗಕ್ಕೆ ನಾವೂ ಹೋಗಬೇಕಾಗಿರುವುದು,
50 - 60 ಜೀವಿಸುವ ನಾವು ಹೇಗೆ ತಾನೇ ಇದನ್ನು ಊಹಿಸಲು ಸಾಧ್ಯ??
ಆದರೂ ಕರುಣಾಮಯಿಯಾದ ಅಲ್ಲಾಹು ಇಟ್ಟನು 
ನಮ್ಮ ಮುಂದೆ ನಾನಾ ರೀತಿಯ ಆಫರ್ ಗಳನ್ನು,
ನಮ್ಮ ನೆರೆಹೊರೆಯವರನ್ನು ಸಂರಕ್ಷಿಸುವ ಬಾಧ್ಯತೆಯಿಂದ ಹಿಡಿದು,
ಒಂದೇ ರಾತ್ರಿಯಲ್ಲಿ ಮಾಡಿದ ಪುಣ್ಯ 80 ವರ್ಷ ಮಾಡಿದ ಪುಣ್ಯಕ್ಕೆ ಸಮ ಎಂದು..!!!
ಆದ್ದರಿಂದ ಮೊದಲು ನನ್ನಲ್ಲಿ ನಂತರ ನಿಮ್ಮಲ್ಲಿ ವಿನಂತಿಸುವುದು ಒಂದೇ....
ಮೊದಲು ವಿಶ್ವಾಸ ಗಟ್ಟಿಯಾಗಿಸಿ, ನೂತನವಾದಿಗಳ ಪೊಳ್ಳು ವಾದಕ್ಕೆ ಬಲಿಯಾಗದಿರಿ,
ಪ್ರವಾದಿ ತಲೆಮಾರುಗಳಿಂದ ಬಂದ  ಸುನ್ನತ್ ಜಮಾ'ಅತ್ ಎತ್ತಿ ಹಿಡಿಯಿರಿ.
ಕಾಲಕ್ಕೆ ತಕ್ಕ ಹಾಗೆ ವಿಶ್ವಾಸ ಬದಲಾಯಿಸಿ,
ಪರಿಶುದ್ಧ ಖುರ್'ಆನ್ ಗೆ ಬಾಹ್ಯ ಅರ್ಥ  ನೀಡಿ,
ಖುರ್'ಆನ್ ಗೆ ವ್ಯಾಖ್ಯಾನ ಬರೆದ ಇಮಾಮರನ್ನು ತಳ್ಳಿದರೆ,
ಖಂಡಿತವಾಗಿಯೂ ಅವನ ವಿಶ್ರಾಂತಿ ಗೃಹ ನರಕವಾಗಿರುತ್ತದೆ..!!!
ನಿಮ್ಮ ಅಮೂಲ್ಯ ಸಂಪತ್ತಿನ ಒಂದು ಭಾಗವನ್ನು ಅನಾಥ,
ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯ ನೀಡಿ, ಕಾರಣ ಪವಿತ್ರ ಖುರ್ ಆನ್
ಅವತೀರ್ನಗೊಂಡಿದ್ದೇ ಇಕ್ ರಹ್ (ಓದಿ) ಎಂಬ ಪದದಿಂದಾಗಿದೆ,
ಆದರಿಂದಲೇ ಶಿಕ್ಷಣಕ್ಕೆ ಇಸ್ಲಾಮಿನಲ್ಲಿ ಎಲ್ಲಿಲ್ಲದ ಮಹತ್ವ.
ನಿಮ್ಮಲ್ಲಿ ಸಹಾಯ ಮಾಡಲು ಸಂಪತ್ತಿಲ್ಲ ಎಂದಾದರೆ 
ನೀಡುವವರನ್ನು ಪ್ರೋತ್ಸಾಹಿಸಿರಿ,ಅವರನ್ನು ವಿಮರ್ಶಿಸದಿರಿ.
ಉಲಮಾಗಳನ್ನು ನಿಂದಿಸದಿರಿ ಕಾರಣ ಅವರ ಮಾಂಸ ವಿಷಯುಕ್ತವಾಗಿರುತ್ತದೆ.
(ಇತರರನ್ನು ನಿಂದಿಸುವುದು ಅವರ ಹಸಿ ಮಾಂಸ ತಿನ್ನುವೂದಕ್ಕೆ ಸಮ)
 "ಜನನ"  ಎಂಬ ಮೂರು ಅಕ್ಷರದಿಂದ'
"ಮರಣ" ಎಂಬ ಮೂರು ಅಕ್ಷರದ ಮಧ್ಯೆ,
"ಜೀವನ" ಎಂಬ ಮೂರು ಅಕ್ಷರದಲ್ಲಿ,
"ಸಮೂಹ" ಎಂಬ ಮೂರು ಅಕ್ಷರಕ್ಕೆ 
ಏನಾದರೂ ಒಳ್ಳೆಯದನ್ನು ಮಾಡಲು ಕಲಿಯೋಣ...
ಬರೀ ನಾನು,ನನ್ನ ಹೆಂಡತಿ,ನನ್ನ ಮಕ್ಕಳು,ಮತ್ತು ಒಬ್ಬ ಅಕ್ಕಸಾಲಿಗ 
ಎಂಬ ಸ್ವಾರ್ಥತೆಯನ್ನು ಬಿಟ್ಟು,ಸೃಷ್ಟಿ ಕರ್ತನಾದ ಅಲ್ಲಾಹು
ಎಲ್ಲದರ ಬಗ್ಗೆಯೂ ಪ್ರಶ್ನಿಸುತ್ತಾನೆ ಎಂಬ ಪರಿ ಜ್ಞಾನ ನಮ್ಮಲ್ಲಿರಬೇಕು.
ನಾವು ಮನುಷ್ಯತ್ವ ಮೂಲ್ಯವುಳ್ಳ ಮಾನವರಾಗಬೇಕು.
"ನಮ್ಮ ಗುರಿ ಒಳ್ಳೆಯದಾಗಿದ್ದರೆ ಸಾಲದು ಮಾರ್ಗವೂ ಒಳ್ಳೆಯದಾಗಿರಲಿ"
ಅಲ್ಲಾಹನು ನಮ್ಮ ಸಕಲ ಪಾಪಗಳನ್ನು ಕ್ಷಮಿಸಲಿ,
ಅಲ್ಲಾಹನು ನಮ್ಮನ್ನು ಸಜ್ಜನರ ಮಾರ್ಗದಲ್ಲಿ ನಡೆಸಲಿ,
ನಮಗೆ ಪೂರ್ಣ ಆರೋಗ್ಯದ ಧೀರ್ಘಾಯುಷ್ಯವನ್ನು  ನೀಡಲಿ,
ಮರಣದ ಸಮಯದಲ್ಲಿ ಪೂರ್ಣ ವಿಶ್ವಾಸದಿಂದ ಲಾ ಇಲಾಹ ಇಲ್ಲಲ್ಲಃ 
ಎಂಬ ಕಲಿಮ ಹೇಳಿ,ಸ್ವರ್ಗದ ಫೋಟೋ ಕಂಡು ಮರಣ ಹೊಂದಲು ಅಲ್ಲಾಹು ಭಾಗ್ಯ ನೀಡಲಿ,
ನಾಳೆ ಪರಲೋಕದಲ್ಲಿ ಪ್ರವಾದಿ(ಸ)ರವರಿಂದ ಉದ್ಘಾಟನೆಗೊಳ್ಳುವ ಸ್ವರ್ಗದಲ್ಲಿ 
ನಮ್ಮ ತಂದೆ,ತಾಯಿ,ಕುಟುಂಬ,ನಮ್ಮ ಸ್ನೇಹಿತರು,ನಮ್ಮ ಅಹ್ಲುಸ್ಸುನ್ನದ ನೇತಾರರು,
ಎಲ್ಲರನ್ನೂ ಅಲ್ಲಾಹು ಒಂದುಗೂಡಿಸಲಿ..ಅಮೀನ್.











No comments:

Post a Comment